ಕಂದಾಯ ಇಲಾಖೆ ನಡಿಗೆ ಜನರ ಮನೆ-ಮನೆ ಬಾಗಿಲಿಗೆ' - ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು



ಕಂದಾಯ ಇಲಾಖೆ ನಡಿಗೆ ಜನರ ಮನೆ-ಮನೆ ಬಾಗಿಲಿಗೆ'  - ಪ್ರಗತಿ ಪರಿಶೀಲಿಸಿದ  ಜಿಲ್ಲಾಧಿಕಾರಿಗಳು
ರಾಮನಗರ ಡಿ. 15 (ಕನರ್ಾಟಕ ವಾತರ್ೆ):-ಬಹಳ ವರ್ಷಗಳಿಂದಲೂ ರೈತರ ಪಹಣಿಯಲ್ಲಿ ಸಾಕಷ್ಟು ಸಮಸ್ಯೆಗಳಿರುವುದನ್ನು ರಾಮನಗರ ಜಿಲ್ಲಾಡಳಿತವು ಗಮನಿಸಿರುತ್ತದೆ.  ರೈತರು ತಾಲ್ಲೂಕು ಕಚೇರಿಗಳಿಗೆ ಅಲೆಯುವುದನ್ನು  ತಪ್ಪಿಸಲು  ರೈತರ ಮನೆಯ ಬಾಗಿಲಿಗೆ ಕಂದಾಯ ಇಲಾಖೆ ನೌಕರರನ್ನು ಕಳುಹಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ. 
ಖಾತೆದಾರರ ಹೆಸರು ತಿದ್ದುಪಡಿ, ವಿಸ್ತೀರ್ಣ ತಿದ್ದುಪಡಿ, ಬೆಳೆ ತಿದ್ದುಪಡಿ, ಪೌತಿಖಾತೆ, ವಿಭಾಗ ಪತ್ರದಂತೆ ಖಾತೆ, ಹಳೆಯ ದಾನ ಪತ್ರ/ವಿಲ್ ಪತ್ರದಂತೆ ಖಾತೆ, ಪೋಡಿ, ಹಳೆಯ ಕ್ರಯಪತ್ರದಂತೆ ಖಾತೆ, ಹಿಸ್ಸಾ/ಪೋಡಿ ಅದಲು-ಬದಲು, ಪೋಡಿಯಂಥ ಇಂಡೀಕರಣವಾಗದೆ ಇರುವ ಪ್ರಕರಣಗಳು, ಸಾಗುವಳಿ ಚೀಟಿಯಂತೆ ಖಾತೆ ಹಾಗು ಇತರೆ ಪ್ರಕರಣಗಳ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಹಾಗೂ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಅಜರ್ಿಗಳನ್ನು ಉಚಿತವಾಗಿ ನೀಡಿ ತಮ್ಮಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸಲು  ರೈತರಲ್ಲಿ ಕೋರಿದ್ದು ಈ ಸಂಬಂಧ  ಕಾರ್ಯ ಪ್ರಗತಿಯನ್ನು  ಪರಿಶೀಲಿಸಲು  ಮಾನ್ಯ ಜಿಲ್ಲಾಧಿಕಾರಿಗಳಾದ  ಡಾ. ಬಿ.ಆರ್. ಮಮತಾ ಅವರು 2017ರ ಡಿ. 14ರಂದು ಚಿಕ್ಕಮುದವಾಡಿ, ಅಳ್ಳಿಮಾರನಹಳ್ಳಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿನ ಗಾಣಾಳು ಗ್ರಾಮ, ಕಾಲೋನಿಗಳ ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. 
ಮೊದಲಿಗೆ ಪೋಡಿ ಮುಕ್ತ ಗ್ರಾಮ ಅಭಿಯಾನ ಚಾಲನೆಯಲ್ಲಿರುವ ಚಿಕ್ಕಮುದವಾಡಿಯಲ್ಲಿನ ರೈತರ ಮನೆ-ಮೆನೆಗಳ ಬಾಗಿಲಿಗೆ  ತೆರಳಿ ರೈತರ  ಸಮಸ್ಯೆಗಳು  ಹಾಗೂ ಕಂದಾಯ ಅಧಿಕಾರಿಗಳು, ನೌಕರರು ಈಗಾಗಲೇ ಭೇಟಿ ನೀಡಿ ಕೈಗೊಂಡಿರುವ ಕ್ರಮಗಳ  ಬಗ್ಗೆ ಮಾಹಿತಿ  ಪಡೆದರು.  ಈ ಸಂದರ್ಭದಲ್ಲಿ  ಜಿಲ್ಲಾಧಿಕಾರಿಯವರು ವಿಕಲಚೇತನರು, ಹಿರಿಯ ನಾಗರೀಕರನ್ನು ಮಾತನಾಡಿಸಿ ಮಾಸಾಶನ ಸರಿಯಾಗಿ ತಲುಪುತ್ತಿರುವ ಬಗ್ಗೆ ವಿಚಾರಿಸಿದರು. ನಂತರ ಅಳ್ಳಿಮಾರನಳ್ಳಿಗೆ ಭೇಟಿ ನೀಡಿ ಗ್ರಾಮದಲ್ಲಿರುವ 186 ಕುಟುಂಬಗಳು, ರೈತರು 480 ಎಕರೆ ಪ್ರದೇಶಗಳಲ್ಲಿ ಬೆಳೆದಿರುವ ಬೆಳೆಗಳ ಬಗ್ಗೆ ಮಾಹಿತಿ, ಕೆರೆಕಟ್ಟೆಗಳು ತುಂಬಿರುವ ಬಗ್ಗೆ ಆ ಗ್ರಾಮದಲ್ಲಿರುವ 89 ಬೋರ್ವೆಲ್ಗಳ ಬಗ್ಗೆಸಾರ್ವಜನಿಕರಿಂದಮಾಹಿತಿ ಪಡೆದರು.
ನಂತರ ಗಾಣಾಳು ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಜಯಮ್ಮ, ದಾಸೇಗೌಡ ಮೊದಲಾದ ನಾಗರೀಕರನ್ನು ಮಾತನಾಡಿಸಿ ಕಟಾವು ಮಾಡಿದ ನಂತರ ಭತ್ತ, ರೇಷ್ಮೆ ಮೊದಲಾದ ಬೆಳೆಗಳಿಗೆ ರೋಗ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸಿದರು   ಅವಿಭಕ್ತ-ವಿಭಕ್ತ ಕುಟುಂಬಗಳಿಗೆ ಸಕರ್ಾರದ ಸವಲತ್ತುಗಳು ಸರಿಯಾದ ಕ್ರಮದಲ್ಲಿ ತಲುಪುವಂತೆ ಕ್ರಮ ಕೈಗೊಳ್ಳಲು ನೆರೆದಿದ್ದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು. ,  ಸಾರ್ವಜನಿಕರು ಈ  ಯೋಜನೆಯನ್ನು ಸದುಪಯೋಗ ಪಡಿಸುಕೊಳ್ಳುವಂತೆ ಕರೆ  ನೀಡಿದರು  ಜಿಲ್ಲಾಧಿಕಾರಿಯವರು  ತಮ್ಮ ಮನೆಗಳಿಗೆ ಭೇಟಿ ನೀಡಿ ಅಹವಾಲುಗಳನ್ನು ಸ್ವೀಕರಿಸುತ್ತಾ ಮಾತಾಡುವುದನ್ನು ನೋಡಿ ಸಾರ್ವಜನಿಕರು ಸಂತಸಗೊಂಡರು.
ಈ ಸಂದರ್ಭದಲ್ಲಿ ಕನಕಪುರ ತಹಶೀಲ್ದಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಚಿಕ್ಕಮುದವಾಡಿ, ಅಳ್ಳಿಮಾರನಹಳ್ಳಿ ಗ್ರಾಮಪಂಚಾಯತ್ನ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸದಸ್ಯರುಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.

Comments

Popular posts from this blog

ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಮಹತ್ತರವಾದುದು:ಎಂ. ಪಿ ಮುಲ್ಲ್ಯೆ ಮುಹಿಲನ್

ಸಾರ್ವಜನಿಕ ಸೇವೆಯಲ್ಲಿ ಮಾನವೀಯ ಸಂವೇದನಾ ಶೀಲತೆಯ ಪಾತ್ರ  ಮಹತ್ವದ್ದು -ನ್ಯಾ. ಪ್ರಕಾಶ್ ಎಲ್. ನಾಡೀಗೇರ್'