ಸಾರ್ವಜನಿಕ ಸೇವೆಯಲ್ಲಿ ಮಾನವೀಯ ಸಂವೇದನಾ ಶೀಲತೆಯ ಪಾತ್ರ ಮಹತ್ವದ್ದು -ನ್ಯಾ. ಪ್ರಕಾಶ್ ಎಲ್. ನಾಡೀಗೇರ್'
ರಾಮನಗರ ಡಿ. 16 (ಕನರ್ಾಟಕ ವಾತರ್ೆ):- ಜಿಲ್ಲಾ ನ್ಯಾಯಾಲಯ ಹಾಗೂ ಜಿಲ್ಲಾಡಳಿತದ ವತಿಯಿಂದ ಕಾನೂನುಗಳ ಅರಿವು, ಮಾನವೀಯ ಸಂವೇಧನಾ ಶೀಲತೆ ಕುರಿತ ಸಂದೇಶ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ/ ಸಿಬ್ಬಂದಿಗಳಿಗೆ 2017ರ ಡಿ. 16ರ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನ್ಯಾ. ಪ್ರಕಾಶ್ ಎಲ್. ನಾಡೀಗೇರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಕರ್ಾರದ ವ್ಯಾಪ್ತಿಯಡಿ ಕರ್ತವ್ಯ ನಿರ್ವಹಿಸುವ ನಾವೆಲ್ಲರೂ ಸಾರ್ವಜನಿಕರ ಸೇವೆ ಮಾಡಲು ನೀಯೋಜನೆಗೊಂಡಿರುತ್ತೇವೆ ಈ ನಿಟ್ಟಿನಲ್ಲಿ ಸಕರ್ಾರಿ ನೌಕರರ ಹಾಗೂ ಸಾರ್ವಜನಿಕರ ನಡುವಿನ ಸಂಬಂಧ ಸಂವೇಧನಾ ಶೀಲವಾಗಿರಬೇಕು. ನೌಕರರ ಕಾರ್ಯಶೀಲತೆಯನ್ನು ಹೆಚ್ಚಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಕಚೇರಿಗೆ ಬಂದಾಗ ತಮಗೆ ಸಕರ್ಾರಿ ಕಚೇರಿಯಲ್ಲಿ ಗೌರವ ಸಿಗುತ್ತದೆ ಎಂಬ ಭಾವನೆ ಮೂಡಿಸಬೇಕು ಸಾರ್ವಜನಿಕ ಸೇವೆ ನಮ್ಮೆಲ್ಲರ ಪಾಲಿನ ಮಹತ್ತರ ಅವಕಾಶವಾಗಿದ್ದು ಕಡಿಮೆ ವೇತನ ಇತ್ಯಾದಿ ಸಮಸ್ಯೆಗಳ ಭಾವನೆಗಳನ್ನು ಬದಿಗಿಟ್ಟು ವಾಸ್ತವವಾಗಿ ಜೀವಿಸಿ ಬಡಜನರ, ಅಸಹಾಯಕರ ಸೇವೆ ಮಾಡಲು ಕರೆ ನೀಡಿದರು.
ಮಾನವನ ಸಾಧನೆಗೆ ಇಚ್ಛಾಶಕ್ತಿ ಮುಖ್ಯ, ನಾವೇ ನಮ್ಮ ಮನೆ, ಕಚೇರಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಈ ಜಗತ್ತಿನಲ್ಲಿ ಸರ್ವರಿಗೂ ವಿಶೇಷ ಪಾತ್ರವಿದ್ದು ನಾವೆಲ್ಲ ನಮ್ಮ ಕಾರ್ಯ ವ್ಯಾಪ್ತಿಯಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡು ಉಳಿದವರಿಗೆ ಮಾರ್ಗದರ್ಶಕವಾದ ಜೀವನ ನಡೆಸಬೇಕು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಆರ್ ಮಮತಾ ಅವರು ಮಾತನಾಡಿ ಕಾನೂನಾತ್ಮಕ ಅರಿವನ್ನು ನೌಕರರಲ್ಲಿ ಮೂಡಿಸಲು ಈಗಾಗಲೇ ನ್ಯಾಯಾಂಗ ಇಲಾಖೆ ನೌಕರರಿಗೆ ಹಾಗೂ ಪೊಲೀಸ್ ಇಲಾಖೆ ನೌಕರರಿಗೆ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇಂತಹ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಜಿಲ್ಲಾ ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸಿದರು. ಜಿಲ್ಲಾ ನ್ಯಾಯಾಲಯವು ತಮ್ಮ ಬಿಡುವಿಲ್ಲದ ಕಾರ್ಯದ ಅವಧಿಯಲ್ಲೂ ಇಂತಹ ಮಾನವೀಯ ಸಂವೇದನಾ ಶೀಲತೆ ವೃದ್ಧಿಸುವ ಕಾರ್ಯಕ್ರಮವನ್ನು ಸಕರ್ಾರಿ ನೌಕರರಿಗೆ ಹಮ್ಮಿಕೊಂಡಿದ್ದು ಇದರಿಂದ ನೌಕರರಲ್ಲಿ ಕಾನೂನು ಅರಿವು ಮೂಡಿ ನೌಕರರಲ್ಲಿರುವ ಜನಪರ ಕಾಳಜಿ ಇನ್ನೂ ವೃದ್ಧಿಸುವದು, ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಂಡು ನೌಕರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಮಸ್ಯೆಗಳ ಬಗೆಹರಿಸಿಕೊಳ್ಳಲು ಸೂಚಿಸಿದರು. ನಾವು ಯಾವಾಗಲು ಸಕಾರಾತ್ಮಕ ಚಿಂತನೆಗಳನ್ನೇ ಮಾಡಬೇಕು ಮಾಡುವ ಕೆಲಸ ಒಳ್ಳೆಯದೇ ಆಗಿರಬೇಕು ಹಾಗೂ ಸಾಮರಸ್ಯ ಜೀವನ ಶೈಲಿಯನ್ನು ಮತ್ತು ನಾಡುಕಂಡ ಆದರ್ಶ ವ್ಯಕ್ತಿಗಳ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಜೀವನವು ಸಾರ್ಥಕಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ತೆರೆದ ಪರದೆಯಲ್ಲಿ ನೌಕರರು-ಸಾರ್ವಜನಿಕರ ಸಂವೇದನಾ ಶೀಲತೆಯ, ಅಬ್ದುಲ್ ಕಲಾಂ, ಮಹಾತ್ಮ ಗಾಂಧೀಜಿಯವರ ಕುರಿತ, ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಕಿರು ಚಿತ್ರಗಳನ್ನು ಪ್ರದಶರ್ಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಸಕರ್ಾರಿ ಅಧಿಕಾರಿಗಳ ವರ್ಗ ಹಾಗೂ ಸಿಬ್ಬಂದಿಗಳ ವರ್ಗ ಉಪಸ್ಥಿತರಿದ್ದರು.
****** ಕನರ್ಾಟಕ ಸಕರ್ಾರ
Good progress
ReplyDelete