ಕಂದಾಯ ಇಲಾಖೆ ನಡಿಗೆ ಜನರ ಮನೆ-ಮನೆ ಬಾಗಿಲಿಗೆ' - ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ರಾಮನಗರ ಡಿ. 15 (ಕನರ್ಾಟಕ ವಾತರ್ೆ):-ಬಹಳ ವರ್ಷಗಳಿಂದಲೂ ರೈತರ ಪಹಣಿಯಲ್ಲಿ ಸಾಕಷ್ಟು ಸಮಸ್ಯೆಗಳಿರುವುದನ್ನು ರಾಮನಗರ ಜಿಲ್ಲಾಡಳಿತವು ಗಮನಿಸಿರುತ್ತದೆ. ರೈತರು ತಾಲ್ಲೂಕು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ರೈತರ ಮನೆಯ ಬಾಗಿಲಿಗೆ ಕಂದಾಯ ಇಲಾಖೆ ನೌಕರರನ್ನು ಕಳುಹಿಸಿ ರೈತರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ. ಖಾತೆದಾರರ ಹೆಸರು ತಿದ್ದುಪಡಿ, ವಿಸ್ತೀರ್ಣ ತಿದ್ದುಪಡಿ, ಬೆಳೆ ತಿದ್ದುಪಡಿ, ಪೌತಿಖಾತೆ, ವಿಭಾಗ ಪತ್ರದಂತೆ ಖಾತೆ, ಹಳೆಯ ದಾನ ಪತ್ರ/ವಿಲ್ ಪತ್ರದಂತೆ ಖಾತೆ, ಪೋಡಿ, ಹಳೆಯ ಕ್ರಯಪತ್ರದಂತೆ ಖಾತೆ, ಹಿಸ್ಸಾ/ಪೋಡಿ ಅದಲು-ಬದಲು, ಪೋಡಿಯಂಥ ಇಂಡೀಕರಣವಾಗದೆ ಇರುವ ಪ್ರಕರಣಗಳು, ಸಾಗುವಳಿ ಚೀಟಿಯಂತೆ ಖಾತೆ ಹಾಗು ಇತರೆ ಪ್ರಕರಣಗಳ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಹಾಗೂ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಅಜರ್ಿಗಳನ್ನು ಉಚಿತವಾಗಿ ನೀಡಿ ತಮ್ಮಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸಲು ರೈತರಲ್ಲಿ ಕೋರಿದ್ದು ಈ ಸಂಬಂಧ ಕಾರ್ಯ ಪ್ರಗತಿಯನ್ನು ಪರಿಶೀಲಿಸಲು ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಬಿ.ಆರ್. ಮಮತಾ ಅವರು 2017ರ ಡಿ. 14ರಂದು ಚಿಕ್ಕಮುದವಾಡಿ, ಅಳ್ಳಿಮಾರನಹಳ್ಳಿ, ...